ಸೋಮವಾರ, ಏಪ್ರಿಲ್ 20, 2009

ಮಂಕುತಿಮ್ಮನ ಕಗ್ಗ

ಕನ್ನಡದ ಕವಿ ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗ ನಿಜವಾಗಿಯೂ ಕನ್ನಡದ ಭಗವದ್ಗೀತೆ ಕಗ್ಗದ ಕೆಲವು ಉಕ್ತಿಗಳನ್ನು ಸಂಗ್ರಹಿಸುವುದೇ ನನ್ನೀ ಪ್ರಯತ್ನ ()
  • ನರನಾರಿಮೂಹದಿಂ ವಂಶವದಕಾಗಿ ಮನೆ
  • ನೆರೆಹೊರೆಗಳೂರು ರಾಷ್ಟ್ರಗಳು ಸಂಘಗಳು
  • ಕೆರೆಯೊಂದು ಕೇಂದ್ರದಿಂದಲೆಯ ಬಳೆಗಳು ನೂರು
  • ಹರಿವಂತೆ ಸಂಸಾರ -ಮಂಕುತಿಮ್ಮ (೨)
ಸುಳಲ್ಲ ಕಥೆಯು ತಿರುಕನು ಕಂಡ ಸವಿಗನಸು
ಚೆಲ್ಲಿತಲ್ಲವೇ ಹಿಟ್ಟು ಘಟವನವನೂದೆಯೇ ? ಜಳ್ಳುಸುಖದುಃಖವಿರಬಹುದದೂಡದರ ಮೂನೆ
ಮುಳ್ಳುಹುದು ಜೀವಕ್ಕೆ -
ಮಂಕುತಿಮ್ಮ
ಕನ್ನಡ powered by Lipikaar.com

(೩)
ದಾಸರೋ ನಾವೆಲ್ಲ ಶುನಕನಂದದಿ ಜಗದ
ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ
ಪಾಶಗಳು ಹೊರಗೆ , ಕೂಂಡಿಗಳು ನಮ್ಮೊಳಗಿಹುವು
ವಾಸನಾಕ್ಷಯ ಮೋಕ್ಷ -ಮಂಕುತಿಮ್ಮ

(೪)
ಗ್ರಹ ಗತಿಯ ತಿದ್ದುವನೆ ಜೋಯಿಸನು ಜಾತಕದಿ ?
ವಿಹಿತವಾಗಿಹುದದರ ಗತಿ ವಿದಿಯಮ್
ಸಹಿಸಿದಲ್ಲದೆ ಮುಗಿಯದಾವ ದೆಸೆ ಬಂದೊಡಂ
ಸಹನೆ ವಜ್ರದ ಕವಚ -ಮಂಕುತಿಮ್ಮ
(೫)
ಸತ್ಯ ಶಿವ ಸುಂದರದ ಸಚಿದಾನಂದನದ
ಭಿತ್ತಿಯಲಿ ಬಣ್ಣಬಣ್ಣದ ಜೀವಚಿತ್ರ
ನಿತ್ಯ ನೀನದ ನೆನೆದು ಚಿತ್ರದಲಿ ಮನವಿರಿಸೆ
ವೃತ್ತಿ ತನ್ಮಯವಹುದೂ -ಮಂಕುತಿಮ್ಮ
(೬)
ಪಾಪವೆಂಬುದದೆನು ಸುಲಭ ಸಾಧನೆಯಲ್ಲ
ತಾಪದಿಂ ಬೇಯದವನ ಅದನೆಸೆಪನಲ್ಲ
ವಾಪಿಯಾಳವ ದಡದಿ ನಿಂತಾತನರಿವನೇಂ ?
ಪಾಪಿಯೆದೆಯೊಳಕಿಳಿಯೊ - ಮಂಕುತಿಮ್ಮ
(೭)
ಆನೆಗಾರ್ ಇರುವೆಗಾರ್ ಕಾಗೆಗಾರ್ ಕಪ್ಪೆಗಾರ್
ಕಾಣಿಸುವವರನ್ನವನು ? ಹಸಿವವರ ಗುರುವು
ಮಾನವನುಮಂತುದರ ಶಿಷ್ಯನವನಾ ರಸನೆ
ನಾನಾವಯವಗಳಲಿ -ಮಂಕುತಿಮ್ಮ

ಶನಿವಾರ, ಏಪ್ರಿಲ್ 11, 2009

ಗುರುವಾರ, ಏಪ್ರಿಲ್ 2, 2009

ನಮ್ಮೂರು

ಹುಲಿ ವೇಷ ಕರಾವಳಿ ಪ್ರದೇಶದ ಸಂಸ್ಕೃತಿಗೆ ಒಂದು ಕೋಡು

ಕನ್ನಡ powered by Lipikaar