ಬುಧವಾರ, ಮಾರ್ಚ್ 25, 2009

ನಾಗಮಂಡಲ -ಪ್ರಕೃತಿ ಅರಾದನೆ


ತುಳುನಾಡಿನ ಹಲವು ದಾರ್ಮಿಕ ಆಚರಣೆಗಳಲ್ಲಿ ನಾಗ (ಸರ್ಪ ) ಆರಾದನೆಯು ತನ್ನದೇ ಅದ ಮಹತ್ವವನ್ನು ಹೊಂದಿದೆ . ಆಶ್ಲೇಷಬಲಿ, ನಾಗ ತಂಬಿಲ ,ನಾಗ ಮಂಡಲ ಸೇವೆ ಇಂದ ನಾಗನನ್ನು ಆರಾದಿಸಿ ತಮ್ಮ ಭಕ್ತಿ ಯನ್ನು ಸಮರ್ಪಿಸುತ್ತಾರೆ .ನಾಗರಾದನೆಒಂದು ರೀತಿಯಲ್ಲಿ ಪ್ರಕೃತಿ ಅರಾದಾನೆ. ಉರಗ ಸಂತತಿಯ ಉಳಿವು ಮತ್ತು ನಾಗ ಬನದ ಹೆಸರಲ್ಲಿ ಮರಗಿಡಗಳ ನಾಶತಪ್ಪುತ್ತದೆ.
ಆನಾದಿ ಕಾಲದಿಂದಲೂ ಪ್ರಕೃತಿಯ ಮಡಿಲಲ್ಲೇ ಬೆಳೆದು ,ಪ್ರಕೃತಿಯಲ್ಲೇ ಒಂದಾಗಿ ಹಲವು ಆಚರಣೆಗಳನ್ನು ಆಚರಿಸುತ್ತಾ ಬಂದನಾವು ಇಂದು ಇವೆಲ್ಲವನ್ನೂ ಮರೆಯುತ್ತಾ ಬರುತ್ತಿದೇವೆ .ಇಂದಿನ ಅಧುನಿಕ ಜಗತ್ತಿನಲ್ಲಿ ಕೆಲವು ಆಚರಣೆಗಳದರೂ ತನ್ನ ಮೌಲ್ಯಗಳನ್ನು ಕಳಕೊಂಡಿಲ್ಲವೆಂಬುದೆ ಸಂತತದ ವಿಷಯ .